Revelation of John 20

ಸಾವಿರ ವರ್ಷಗಳು

1ಆಗ ಒಬ್ಬ ದೇವದೂತನು
20:1 ಪ್ರಕ. 9:1:
ಅಧೋಲೋಕದ
20:1 ಪ್ರಕ. 1 18:
ಬೀಗದ ಕೈಯನ್ನೂ ಮತ್ತು ದೊಡ್ಡ ಸರಪಣಿಯನ್ನೂ ಕೈಯಲ್ಲಿ ಹಿಡಿದುಕೊಂಡು ಪರಲೋಕದಿಂದ ಇಳಿದು ಬರುವುದನ್ನು ಕಂಡೆನು.
2ಅವನು ಪಿಶಾಚಿಯೂ ಸೈತಾನನೂ ಆಗಿರುವ
20:2 ಪ್ರಕ. 12:9:
ಪುರಾತನ ಸರ್ಪವೆಂಬ ಘಟಸರ್ಪವನ್ನು
20:2 2 ಪೇತ್ರ. 2:4; ಯೂದ 6:
ಹಿಡಿದು ಸಾವಿರ ವರ್ಷ ಬಂಧನದಲ್ಲಿಟ್ಟನು.
3ಆ ಸಾವಿರ ವರ್ಷ ಮುಗಿಯುವ ತನಕ
20:3 ಪ್ರಕ. 20:8, 10
ಸೈತಾನನು ಇನ್ನೂ ಜನಾಂಗಗಳನ್ನು ಮೋಸಗೊಳಿಸದಂತೆ ದೇವದೂತನು ಅವನನ್ನು
20:3 ಪ್ರಕ. 9:1:
ಅಧೋಲೋಕಕ್ಕೆ ತಳ್ಳಿ ಬಾಗಿಲು ಮುಚ್ಚಿ ಅದಕ್ಕೆ
20:3 ದಾನಿ. 6:17; ಮತ್ತಾ 27:66:
ಮುದ್ರೆಹಾಕಿದನು. ಆ ಸಾವಿರ ವರ್ಷಗಳಾದ ಮೇಲೆ ಅವನಿಗೆ ಸ್ವಲ್ಪಕಾಲ ಬಿಡುಗಡೆ ಆಗುವುದು.

4
20:4 ದಾನಿ. 7:9; ಮತ್ತಾ 19:28; ಲೂಕ. 22:30.
ತರುವಾಯ ಸಿಂಹಾಸನಗಳನ್ನು ಕಂಡೆನು.
20:4 ಪ್ರಕ. 3:21:
ಅವುಗಳ ಮೇಲೆ ಕುಳಿತಿದ್ದವರಿಗೆ
20:4 ದಾನಿ. 7:22; 1 ಕೊರಿ. 6:2,3:
ನ್ಯಾಯ ತೀರಿಸುವ ಅಧಿಕಾರವು ಕೊಡಲ್ಪಟ್ಟಿತು. ಇದಲ್ಲದೆ
20:4 ಪ್ರಕ. 6:9:
ಯೇಸುವಿನ ಸಾಕ್ಷಿಯ ನಿಮಿತ್ತವಾಗಿಯೂ, ದೇವರ ವಾಕ್ಯದ ನಿಮಿತ್ತವಾಗಿಯೂ ಶಿರಚ್ಛೇದನಗೊಂಡವರ ಆತ್ಮಗಳನ್ನೂ
20:4 ಪ್ರಕ. 13:12, 14-16:
ಮೃಗಕ್ಕೂ ಅದರ ವಿಗ್ರಹಕ್ಕೂ ಆರಾಧನೆ ಮಾಡದೇ ತಮ್ಮ ಹಣೆಯ ಮೇಲೆ ಮತ್ತು ಕೈಗಳ ಮೇಲೆ ಅದರ ಗುರುತು ಹಾಕಿಸಿಕೊಳ್ಳದವರನ್ನೂ ಕಂಡೆನು.
20:4 ಯೋಹಾ. 14:19; 2 ತಿಮೊ. 2:11:
ಅವರು ಪುನಃ ಜೀವಿತರಾಗಿ ಎದ್ದು
20:4 ದಾನಿ. 7:18; ಮತ್ತಾ 20:21; 2 ತಿಮೊ. 2:12:
ಸಾವಿರ ವರ್ಷ ಕ್ರಿಸ್ತನೊಂದಿಗೆ ಆಳಿದರು.

5ಸತ್ತವರಲ್ಲಿ ಉಳಿದವರು ಆ ಸಾವಿರ ವರ್ಷಗಳ ಮುಗಿಯುವವರೆಗೂ ಜೀವಿತರಾಗಿ ಏಳಲಿಲ್ಲ. ಇದೇ ಮೊದಲನೇಯ ಪುನರುತ್ಥಾನವು. 6
20:6 ಪ್ರಕ. 14:13; 19:9:
ಮೊದಲನೇಯ ಪುನರುತ್ಥಾನದಲ್ಲಿ ಸೇರಿದವರು ಧನ್ಯರೂ ಮತ್ತು ಪರಿಶುದ್ಧರೂ ಆಗಿದ್ದಾರೆ.
20:6 ಮತ್ತಾ 10:28:
ಇಂಥವರ ಮೇಲೆ ಎರಡನೆಯ ಮರಣಕ್ಕೆ ಅಧಿಕಾರವಿಲ್ಲ. ಆದರೆ ಅವರು ದೇವರಿಗೂ ಕ್ರಿಸ್ತನಿಗೂ
20:6 ಯೆಶಾ. 61:6:
ಯಾಜಕರಾಗಿ
20:6 ವ. 4:
ಕ್ರಿಸ್ತನೊಂದಿಗೆ ಆ ಸಾವಿರ ವರ್ಷ ಆಳುವರು.

7ಆ ಸಾವಿರ ವರ್ಷಗಳು ಮುಗಿದ ಮೇಲೆ
20:7 ಪ್ರಕ. 20:2, 3:
ಸೈತಾನನಿಗೆ ಸೆರೆಯಿಂದ ಬಿಡುಗಡೆಯಾಗುವುದು.
8ಅವನು ಹೊರಗೆ ಬಂದು ಭೂಮಿಯ ನಾಲ್ಕು ದಿಕ್ಕುಗಳಲ್ಲಿರುವ ದೇಶಗಳನ್ನು ಮೋಸಗೊಳಿಸಿ,
20:8 ಯೆಹೆ. 38:2, 16; 39:1:
ಗೋಗ್ ಮತ್ತು ಮಾಗೋಗ್ ಎಂಬ ಜನಾಂಗಗಳನ್ನು ಮರುಳುಗೊಳಿಸಿ
20:8 ಪ್ರಕ. 16:14:
ಯುದ್ಧಕ್ಕೆ ಸೇರಿಸುವನು. ಅವರ ಸಂಖ್ಯೆಯು ಸಮುದ್ರದ ಮರಳಿನಷ್ಟಿರುವುದು.

9ಅವರು ಭೂಮಿಯಲ್ಲೆಲ್ಲಾ ಹರಡಿಕೊಂಡು ದೇವಜನರ ಪಾಳೆಯಕ್ಕೂ ಆ ಪ್ರಿಯ ಪಟ್ಟಣಕ್ಕೂ ಮುತ್ತಿಗೆ ಹಾಕುವರು. ಆದರೆ
20:9 ಯೆಹೆ. 39:6:
ಪರಲೋಕದಿಂದ ಬೆಂಕಿ ಇಳಿದು ಬಂದು ಅವರನ್ನು ದಹಿಸಿಬಿಡುವುದು.
10ಇದಲ್ಲದೆ
20:10 ಪ್ರಕ. 20:3, 8:
ಅವರನ್ನು ಮೋಸಗೊಳಿಸಿದ ಪಿಶಾಚನು
20:10 ಪ್ರಕ. 19:2, 3:
ಬೆಂಕಿ ಗಂಧಕಗಳು ಉರಿಯುವ ಕೆರೆಯಲ್ಲಿ ದೊಬ್ಬಲ್ಪಟ್ಟನು. ಅಲ್ಲಿ
20:10 ಪ್ರಕ. 16:13:
ಮೃಗವೂ, ಸುಳ್ಳುಪ್ರವಾದಿಯೂ ಸಹ ಇದ್ದಾರೆ. ಅವರು ಹಗಲಿರುಳು ಯುಗಯುಗಾಂತರಗಳಲ್ಲಿಯೂ ಯಾತನೆ ಪಡುತ್ತಿರುವರು.

ಕಡೇ ನ್ಯಾಯತೀರ್ಪನ್ನು ಕುರಿತದ್ದು

11ಆ ಮೇಲೆ ಬೆಳ್ಳಗಿರುವ ಮಹಾ ಸಿಂಹಾಸನವನ್ನೂ ಅದರ ಮೇಲೆ ಕುಳಿತಿದ್ದಾತನನ್ನೂ ಕಂಡೆನು.
20:11 ಕೀರ್ತ. 102:26:
ಆತನೆದುರಿನಿಂದ ಭೂಮ್ಯಾಕಾಶಗಳು ಓಡಿಹೋದವು, ಆದರೆ ಹೋಗುವುದಕ್ಕೆ ಅವುಗಳಿಗೆ ಸ್ಥಳವಿರಲಿಲ್ಲ.
12ಇದಲ್ಲದೆ ಸತ್ತವರಾದ, ಶ್ರೇಷ್ಠರು ಮತ್ತು ಕನಿಷ್ಠರೆಲ್ಲರು ಸಿಂಹಾಸನದ ಮುಂದೆ ನಿಂತಿರುವುದನ್ನು ಕಂಡೆನು. ಆಗ
20:12 ದಾನಿ. 7:10:
ಪುಸ್ತಕಗಳು ತೆರೆಯಲ್ಪಟ್ಟವು.
20:12 ಲೂಕ. 10:20; ಫಿಲಿ. 4:3:
ಜೀವಬಾಧ್ಯರ ಪಟ್ಟಿ ಎಂಬ ಇನ್ನೊಂದು ಪುಸ್ತಕವು ತೆರೆಯಲ್ಪಟ್ಟಿತು. ಆ ಪುಸ್ತಕಗಳಲ್ಲಿ ಬರೆದಿರುವ ಪ್ರಕಾರ,
20:12 ರೋಮಾ. 14:10; 2 ಕೊರಿ. 5:10:
ಅವರವರ ಕೃತ್ಯಗಳಿಗೆ ತಕ್ಕಂತೆ ಸತ್ತವರಿಗೆ ನ್ಯಾಯತೀರ್ಪಾಯಿತು.

13ಸಮುದ್ರವು ತನ್ನೊಳಗಿದ್ದ ಸತ್ತವರನ್ನು ಒಪ್ಪಿಸಿತು.
20:13 ಪ್ರಕ. 6:8:
ಮೃತ್ಯುವೂ ಪಾತಾಳವೂ ತಮ್ಮ ವಶದಲ್ಲಿದ್ದ ಸತ್ತವರನ್ನು ಒಪ್ಪಿಸಿದವು. ಅವರಲ್ಲಿ ಪ್ರತಿಯೊಬ್ಬನಿಗೆ ಅವನವನ ಕೃತ್ಯಗಳ ಪ್ರಕಾರ ನ್ಯಾಯತೀರ್ಪಾಯಿತು.
14ಆ ಮೇಲೆ ಮೃತ್ಯುವೂ ಪಾತಾಳವೂ
20:14 ಲೂಕ. 20:36; 1 ಕೊರಿ. 15:26; ಪ್ರಕ. 21:4:
ಬೆಂಕಿಯ ಕೆರೆಗೆ ದೊಬ್ಬಲ್ಪಟ್ಟವು.
20:14 ವ. 6:
ಆ ಬೆಂಕಿಯ ಕೆರೆಯೇ ಎರಡನೆಯ ಮರಣವು.
ಯಾರ ಹೆಸರು ಜೀವಬಾಧ್ಯರ ಪುಸ್ತಕದಲ್ಲಿ ಬರೆದದ್ದಾಗಿ ಕಾಣಲಿಲ್ಲವೋ
20:15 ಮತ್ತಾ 13:42, 50.
ಅವನು ಬೆಂಕಿಯ ಕೆರೆಗೆ ದೊಬ್ಬಲ್ಪಟ್ಟನು.

15

Copyright information for KanULB